ಶ್ರೀಮತಿ ಮಾಧವಿಲತಾ, ಬಿ.ಜೆ.ಪಿ. ಕಾರ್ಯಕರ್ತೆ, ಹೈದ್ರಾಬಾದ್ ಇವರ ಬೆಟ್ಟಿ.
Date : 19-09-2025
ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿಯವರ ಮಠಕ್ಕೆ ದಿನಾಂಕ:-19.09.2025 ರಂದು ಶ್ರೀ ತಿಪ್ಪೇಸ್ವಾಮಿ, ಆರ್.ಎಸ್.ಎಸ್.ಮದ್ಯ ಕ್ಷೇತ್ರಿಯಾ ಕಾರ್ಯವಾಹಕ, ಶ್ರೀಮತಿ ಮಾಧವಿಲತಾ, ಬಿ.ಜೆ.ಪಿ. ಕಾರ್ಯಕರ್ತೆ, ಹೈದ್ರಾಬಾದ್, ಡಾ|| ಸಿ.ಎಸ್.ವಿ. ಪ್ರಸಾದ, ಸ್ವರ್ಣ ಸಮೂಹ ಸಂಸ್ಥೆ ನಿರ್ದೇಶಕರು, ಪ್ರೋ|| ವಿರೇಶ ಬಾಳಿಕಾಯಿ, ಎ.ಬಿ.ವಿ.ಪಿ. ಎನ್.ಇ.ಸಿ. ಮೆಂಬರ್, ಶ್ರೀ ತೇಜಸ್ ಗೋಕಾಕ, ಎ.ಬಿ.ವಿ.ಪಿ. ರಾಜ್ಯ ಕಜಾಂಜಿ, ಶ್ರೀ ವೆಂಕಟೇಶ ಡಾಂಗೆ, ಎ.ಬಿ.ವಿ.ಪಿ. ರಾಜ್ಯ ಸಂಘಟನಾ ಕಾರ್ಯದರ್ಶಿ ಇವರುಗಳು ಶ್ರೀಮಠಕ್ಕೆ ಬೆಟ್ಟಿ ಕೊಟ್ಟು ಉಭಯಶ್ರೀಗಳವರ ಗದ್ದುಗೆಗಳ ದರ್ಶನಾಶೀರ್ವಾದವನ್ನು ಪಡೆದುಕೊಂಡರು. ಸನ್ಮಾನ್ಯರನ್ನು ಶ್ರೀಮಠದ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀಮಠದ ಚೇರ್ಮನ್ನರಾದ ಶ್ರೀ ಸಿಎ. ಚನ್ನವೀರ ಡಿ. ಮುಂಗುರವಾಡಿ ಮತ್ತು ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.